The devotion of Our Lady of Health at Harihar seems to have begun in the eighteenth century, as can be gleaned from the available documentary sources. People from the neighbouring region belonging to various religious affiliations began to make pilgrimages to this place. The miraculous statue of the Blessed Virgin Mary set up here became an object of veneration. In the course of time a small oratory (later a small church) was constructed in these hallowed precincts. This oratory formed the nucleus of Marian devotion and became a pilgrimage centre. Over the years the oratory has grown in size and its fame has spread far and wide. In the diocese of Shimoga, it has evolved as the most frequented holy place. The annual feast of Our Lady of Health at Harihar, celebrated with due solemnity on September 8, attracts thousands of people of Karnataka as well as of neighbouring states.
 
The centre of pilgrimage located in the premises of the church at Harihar since more than a century is popularly known now as the Shrine of Our Lady of Good Health. It took roots, as a much frequented and greatly admired centre of pilgrimage and recounts a history of over 200 years in the humble surroundings of the river Thungabhadra.
 
As year passed by, this centre becomes a parish church at Harihar town with Our of Good Health as its titular.   The parish church has been fulfilling its role and function as a Shrine, although it had no canonical recognition of being a Shrine.  The church precincts have formed an integral part of the “topography” of the faith and piety not only of the Christian denominations but also of other believers.  People of different religious persuasions visit the church all-round the year, to fulfill their vows and promises, offer thanks and invoke divine assistance, through their beloved “Lady of Good Health”. Many of them testify to have received heavenly blessings and favours at this Shrine. 

Now, considering that:
 
The Church of Our Lady of Health at Harihar is acknowledged as a place of pilgrimage by numerous people, well suited   to foster and enhance piety and as a befitting place for effective proclamation of the Gospel;
 
The pilgrims its attracts and welcomes indicates that this centre has abundant potential for mission “ad agentes”, in fulfilling its role of evangelization;
 
And taking into account the fact that:
 
This centre serves as a memorial of an extraordinary event that give rise to persevering devotion and as a place of divine assistance, and in virtue of the frequent signs of benevolence that has witnessed as a  place of the efficacious intercession of the Blessed Virgin Mary;
 
This place bears testimony to the piety and gratitude of the people for the innumerable favours received; and by virtue of the vibrant sacramental and liturgical life, of faith and growth in grace;
 
Through the ministries of this centre, people are exhorted to a life of radical changes, a life of charity, works of mercy and are urged and inspired to follow Christ more closely.

 


 

ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ

ಹರಿಹರದಲ್ಲಿ ನಮ್ಮ ಆರೋಗ್ಯಮಾತೆಯ ಭಕ್ತಿಯು 18ನೇ ಶತಮಾನದಲ್ಲಿ ಪ್ರಾರಂಭವಾಯಿತೆಂದು ಲಭ್ಯವಿರುವ ದಾಖಲೆ, ಮೂಲಗಳಿಂದ ಸಂಗ್ರಹಿಸಿಕೊಳ್ಳಬಹುದಾಗಿದೆ. ನೆರೆಹೊರೆಯ ಪ್ರದೇಶದ ವಿವಿಧ ಧಾರ್ಮಿಕ ಪಂಗಡಗಳಿಗೆ ಸೇರಿದ ಜನರು ಈ ಸ್ಥಳಕ್ಕೆ ತೀರ್ಥಯಾತ್ರೆ ಮಾಡತೊಡಗಿದರು. ಅವರು ಇಲ್ಲಿ ಪ್ರತಿಷ್ಟಾಪಿಸಿಸಲಾದ ಕನ್ಯಾಮರಿಯಮ್ಮನವರ ಸ್ವರೂಪವನ್ನು ಗೌರವಿಸಲಾರಂಭಿಸಿದರು. ಈ ಪವಿತ್ರಾಂಗಣದಲ್ಲಿ ತಲೆ ಎತ್ತಿದ ಪೂಜಾಮಂದಿರ ಕ್ರಮೇಣ ಕಿರುದೇವಾಲಯವಾಗಿ ಮಾರ್ಪಟ್ಟಿತು. ಈ ಕಿರು ದೇವಾಲಯ, ಮರಿಯ ಭಕ್ತಿ ಮತ್ತು ತೀರ್ಥಯಾತ್ರೆಯ ಕೇಂದ್ರವಾಯಿತು. ಮುಂದಿನ ವರ್ಷಗಳಲ್ಲಿ ಅದು ತನ್ನ ಆಕಾರ ಮತ್ತು ಮಹತ್ವದಲ್ಲಿ ಬೆಳೆಯಿತು, ಅದರ ಪ್ರಖ್ಯಾತಿ ಉದ್ದಗಲಕ್ಕೆ ಹರಡಿಕೊಂಡಿತು. ಶಿವಮೊಗ್ಗ ಧರ್ಮಕ್ಷೇತ್ರದಲ್ಲಿ ಭಕ್ತರು ನಿರಂತರ ಪ್ರಾರ್ಥಿಸುವ ಕೇಂದ್ರ ಇದಾಗಿದೆ. ಹೀಗೆ ಪ್ರತಿವರ್ಷ ಸೆಪ್ಟೆಂಬರ್ 8ರಂದು ಸಂಭ್ರಮದಿಂದ ಹರಿಹರದಲ್ಲಿ ಅಚರಿಸಲಾಗುವ ಹರಿಹರದ ಆರೋಗ್ಯಮಾತೆಯ ಹಬ್ಬ ಕರ್ನಾಟಕ ರಾಜ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಾ ಬಂದಿದೆ.

ತೀರ್ಥಯಾತ್ರೆಯ ಕೇಂದ್ರವಾಗಿ ಒಂದು ಶತಮಾನಕ್ಕೂ ದೀರ್ಘ ಕಾಲದಿಂದ ಜನಮನ್ನಣೆಗಳಿಸಿದ ಹರಿಹರದ ದೇವಾಲಯ, ನಮ್ಮ ಆರೋಗ್ಯ ಮಾತೆ ನಾಮಾಂಕಿತ ಪುಣ್ಯಕ್ಷೇತ್ರವೆಂದು ಪ್ರಚಲಿತವಾಗಿದೆ.
ಅದು ತುಂಗಾಭದ್ರ ನದಿಯ ತೀರದಲ್ಲಿ ಸಾಮಾನ್ಯ ಮೂಲವನ್ನು ತಳೆದಿದ್ದರೂ ಯಾತ್ರಾರ್ಥಿಗಳ ನಿರಂತರ ಭೇಟಿಯಿಂದ ಮಹಾಅಭಿಮಾನದ ಯಾತ್ರಸ್ಥಳವಾಗಿ ಬೇರೂರಿ, ಸುಮಾರು 200 ವರ್ಷಗಳ ಇತಿಹಾಸವನ್ನು ಹೊಂದಿದೆ.

ಕಾಲ ಕಳೆದಂತೆ ಈ ಸ್ಥಳವು ಹರಿಹರ ಪಟ್ಟಣದಲ್ಲಿ ಆರೋಗ್ಯ ಮಾತೆಯನ್ನು ಪಾಲಕಿಯನ್ನಾಗಿ ಪಡೆದು ಒಂದು ಧರ್ಮಕೇಂದ್ರವಾಯಿತು.  ಈ ಸ್ಥಳವನ್ನು ಧರ್ಮಸಭೆಯ ನಿಯಮಾವಳಿ ಪುಣ್ಯಕ್ಷೇತ್ರವೆಂದು ಗುರುತಿಸದೆ ಇದ್ದರೂ, ಧರ್ಮಕೇಂದ್ರವು ಪುಣ್ಯಕ್ಷೇತ್ರದ ಪಾತ್ರ ಮತ್ತು ಹೊಣೆಗಾರಿಕೆಯನ್ನು ನಿರ್ವಹಿಸಿಕೊಂಡು ಬಂದಿದೆ.  ದೇವಾಲಯದ ಸಂಪೂರ್ಣ ಆವರಣ ಕ್ರೈಸ್ತ ಸಮುದಾಯಗಳಿಗೆ ಮಾತ್ರವಲ್ಲ, ಇತರೆ ಭಕ್ತವಿಶ್ವಾಸಿಗಳಿಗೂ ವಿಶ್ವಾಸ ಮತ್ತು ಭಕ್ತಿಯ ತಾಣವಾಗಿ ಪರಿವರ್ತನೆಗೊಂಡಿದೆ. ವಿವಿಧ ಧರ್ಮಾವಲಂಬಿಗಳು ಈ ದೇವಾಲಯವನ್ನು ಸಂಧಿಸಿ ತಮ್ಮ ಹರಕೆ ಮತ್ತು ಕೋರಿಕೆಗಳನ್ನು ಪೂರೈಸಿಕೊಳ್ಳುತ್ತಾರೆ.  ಇವರು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಆತ್ಮೀಯ ಆರೋಗ್ಯಮಾತೆಯ ಮುಖಾಂತರ ದೈವಿಕ ನೆರವನ್ನು ವಿನಂತಿಸುತ್ತಾರೆ.  ಅವರಲ್ಲಿ ಬಹು ಮಂದಿ ತಾವು ಸ್ವರ್ಗೀಯ ಆಶೀರ್ವಾದ ಮತ್ತು ವರದಾನಗಳನ್ನು ಪಡೆದಿರುವುದಕ್ಕೆ ಸಾಕ್ಷ್ಯವನ್ನು ನೀಡಿರುತ್ತಾರೆ.

ಈ ವಿದ್ಯಮಾನವನ್ನು ಗಮನಿಸುತ್ತಿರುವಂತೆ

ಹರಿಹರದ ನಮ್ಮ ಆರೋಗ್ಯಮಾತೆ ದೇವಾಲಯ ಅಸಂಖ್ಯಾತ ಜನರಿಂದ ಪುಣ್ಯಕ್ಷೇತ್ರವೆಂದು ಅಂಗೀಕರಿಸಲಾದ ಅಂಶ ಸರ್ವವಿದಿತವಾಗಿದೆ.  ಅದು ಭಕ್ತಿಯನ್ನು ಪೋಷಿಸುತ್ತಾ, ಬೆಳೆಸುತ್ತಾ ಶುಭಸಂದೇಶ ಪ್ರಸಾರಕ್ಕೆ ಸೂಕ್ತವೂ ಪರಿಣಾಮಕಾರಿ ತಾಣವೂ ಎಂದು ಕಂಡು ಬಂದಿದೆ.
 
ಅದು ಯಾತ್ರಾರ್ಥಿಗಳನ್ನು ಆಕರ್ಷಿಸಿ ಸ್ವಾಗತಿಸುತ್ತಾ ಇರುವುದರಿಂದ “ಅನ್ಯ ಜನಾಂಗ”ಗಳಿಗೆ ಶುಭ ಸಂದೇಶವನ್ನು ಸಾರುವ ಪಾತ್ರವನ್ನು ವಹಿಸಲು ಈ ನಿಯೋಗಕ್ಕೆ ಇಲ್ಲಿ ವಿಪುಲ ಅವಕಾಶವಿದೆ.

ಈ ವಿಷಯಗಳನ್ನು ಗಮನಕ್ಕೆ ತಂದು ಕೊಂಡು

ಈ ಕೇಂದ್ರವು ಅನೇಕ ಅಪೂರ್ವ ಘಟನೆಗಳಿಗೆ ಸಾಕ್ಷಿಯಾಗಿ ನಿರಂತರ ಭಕ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅದು ದೈವಿಕ ಮಧ್ಯಸ್ಥಿಕೆಯ ತಾಣವಾಗಿದೆ.  ಅಗಿಂದಾಗ್ಗೆ ಪುನೀತ ಕನ್ಯಾಮರಿಯಮ್ಮನವರು ತಮ್ಮ ಫಲಕಾರಿ ಬಿನ್ನಹದ ಮೂಲಕ ಅನೇಕ ಮಹತ್ಕಾರ್ಯಗಳಿಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಇಲ್ಲಿ ಆಧಾರಗಳಿವೆ.
 
ಅನ್ಯರು ತಾವು ಪಡೆದ ಅಸಂಖ್ಯಾತ ಕೊಡುಗೆಗಳಿಗೆ ಈ ಸ್ಥಳವು ಸಾಕ್ಷಿಯಾಗಿದೆ.  ಜನರ ಭಕ್ತಿಯನ್ನೂ ಕೃತಜ್ಞತೆಯನ್ನೂ ನಾವು ಇಲ್ಲಿ ಕಾಣಬಹುದು. ಈ ಸ್ಥಳ ಸಶಕ್ತ ಸಾಂಸ್ಕಾರಿಕ ಮತ್ತು ದೈವಾರಾಧನಾ ಜೀವನಕ್ಕೂ, ವಿಶ್ವಾಸ ಮತ್ತು ವರಪ್ರಸಾದಕ್ಕೂ ಸಾಕ್ಷಿಯಾಗಿದೆ.
 
ಜನರು ತಮ್ಮ ಜೀವವವನ್ನು ಅಮೂಲಾಗ್ರವಾಗಿ ಪರಿವರ್ತಿಸಿಕೊಳ್ಳಲು ಪರಸೇವೆ, ದಯಾಕ್ರಿಯೆಗಳ ಮುಖಾಂತರ ಕ್ರಿಸ್ತರನ್ನು ನಿಕಟವಾಗಿ ಅನುಸರಿಸುವಂತೆಯೂ ಈ ಕೇಂದ್ರದ ಸೇವಾ ನಿಯೋಗ ಜನರಿಗೆ ಕರೆಕೊಡುತ್ತಾ ಬಂದಿದೆ.

 

Home | News | Sitemap | Contact Us

Copyright © 2016 - www.hariharshrine.org .
Powered by eCreators

Contact Us

Phone: 08192 - 242269
    E-mail: [email protected]
[email protected]

Fr. Anthony Peter : +917349246751

Shrine of Our Lady of Health
P.B.No: 19, Church Road
Harihar - 577 601
Davanagere District
Karnataka