Print

Harihar - May 27, 2012 : On May 27, 2012 Bishop Jerald Isaac Lobo by his decree elevated and declared Harihar Shrine as the Shrine of the Diocese of Shimoga.  Emeritus Archbishop Ignatius Pinto was the main celebrated of the Holy Eucharist.

 

 



 

ಹರಿಹರದ ಆರೋಗ್ಯ ಮಾತೆಯ ದೇವಾಲಯದ ಮುಕುಟಕ್ಕೆ ಪುಣ್ಯಕ್ಷೇತ್ರದ ಗರಿ

Harihar - May 27, 2012:

ಕಳೆದ ಒಂದು ಶತಮಾನಕ್ಕೂ ದೀರ್ಘ ಕಾಲದಿಂದ ಭಕ್ತಾದಿಗಳ ಮನ್ನಣೆ ಗಳಿಸಿರುವ ಶಿವಮೊಗ್ಗ ಧರ್ಮಕ್ಷೇತ್ರದ ಇತಿಹಾಸ ಪ್ರಸಿದ್ದ ಹರಿಹರದ ಆರೋಗ್ಯಮಾತೆಯ ದೇವಾಲಯದ ಮುಕುಟಕ್ಕೆ “ಧರ್ಮಕ್ಷೇತ್ರದ ಪುಣ್ಯಕ್ಷೇತ್ರ” ಪದವಿ ಪ್ರಾಪ್ತವಾಗಿದೆ.

ಮಾತೆ ಮರಿಯ ಹರಿಹರದಲ್ಲಿ ಸತ್ಯಮ್ಮಳೆಂದು ಪ್ರಸಿದ್ದಿಯಾಗಿ ಕಳೆದ 300 ವರ್ಷಗಳಿಂದ ಇಲ್ಲಿ ನೆಲೆಸಿ ಬೇಡಿ ಬಂದ ಭಕ್ತಜನರ ಬೇಡಿಕೆ ಕೋರಿಕೆಗಳಿಗೆ ಸದಾ ತಮ್ಮ ಕೃಪೆಯ ಧಾರೆಯನ್ನು ಸುರಿಸುತ್ತಿದ್ದಾರೆ. ಮಾತೆಯಿಂದ ಪಡೆದ ಉಪಕಾರ ಸ್ಮರಣೆಗಾಗಿ ಯಾವುದೇ ಜಾತಿ ಭೇದ ಇಲ್ಲದೇ ಕ್ರೈಸ್ತರು ಕ್ರೈಸ್ತೇತರು ಮಾತೆಯ ಈ ಪುಣ್ಯಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುವ ಭಕ್ತಜನ ಸಾಗರವೇ ಸಾಕ್ಷಿ. ಮತ್ತು ಮಾತೆಯಿಂದ ಇವರು ಪಡೆದಿರುವ ಉಪಕಾರಗಳು, ಕಷ್ಟ ನೋವುಗಳಿಗೆ ಪರಿಹಾರಗಳು ಸಾಕ್ಷಿಯ ರೂಪದಲ್ಲಿ ಇಲ್ಲಿ ದಾಖಲಾಗಿವೆ.

ಮಾತೆಯ ಈ ಪುರಾತನ ಪ್ರಸಿದ್ದ ದೇವಾಲಯಕ್ಕೆ “ಪುಣ್ಯಕ್ಷೇತ್ರ” ಪದವಿಯನ್ನು ನೀಡಿ ಇದರ ತೇಜೋಮಯ ಪ್ರಭಾವಳಿಯ ಮಹತ್ತನ್ನು ಹೆಚ್ಚಿಸುವ ಕಾರಣವನ್ನು ಮನಗಂಡ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಇವರು, ಮಾತೆಯ ಈ ಪುಣ್ಯಸ್ಥಳದ ದೇವಾಲಯಕ್ಕೆ “ಧರ್ಮಕ್ಷೇತ್ರದ ಪುಣ್ಯಕ್ಷೇತ್ರ” ಎಂಬ ಪದವಿಯನ್ನು ನೀಡುವ ಸೌಭಾಗ್ಯಕ್ಕೆ ಪಾತ್ರರಾಗಿದ್ದಾರೆ.
 
ಪಂಚಶತ್ತಮ ಮಹೋತ್ಸವದ ದಿನ ಹರಿಹರ ಧರ್ಮಕೇಂದ್ರದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ದಾಖಲೆಮಾಡಬಹುದಾದ ಸುದಿನ. ಇದುವರೆಗೂ ಶಿವಮೊಗ್ಗ ಧರ್ಮಕ್ಷೇತ್ರದ ಯಾವುದೇ ದೇವಾಲಯಕ್ಕೆ “ಪುಣ್ಯಕ್ಷೇತ್ರ” ಎಂದು ಅಧಿಕೃತವಾಗಿ ಘೋಷಿಸಿರಲಿಲ್ಲ. ಇದೇ ಪ್ರಥಮ ಬಾರಿಗೆ ಹರಿಹರದ ಆರೋಗ್ಯಮಾತೆಯ ದೇವಾಲಯಕ್ಕೆ ದಿನಾಂಕ 27.05.2012 ರ ಭಾನುವಾರ ಸಂಜೆ 5.00 ಗಂಟೆಗೆ ನಡೆದ ಸಾಂಭ್ರಮಿಕ ದಿವ್ಯ ಬಲಿಪೂಜೆಯಲ್ಲಿ ಹರಿಹರ ಆರೋಗ್ಯ ಮಾತೆಯ ದೇವಾಲಯವನ್ನು “ಧರ್ಮಕ್ಷೇತ್ರದ ಪುಣ್ಯಕ್ಷೇತ್ರ”ವೆಂದು ಅಧಿಕೃತವಾಗಿ ಘೋಷಿಸಲಾಯಿತು.

 

 

ಹರಿಹರ ಮಾತೆಯ ಅದ್ಭುತ ಸ್ವರೂಪದ ಗವಿಯ ಉದ್ಘಾಟನೆ

ಪುರಾತನ ಕಾಲದಂದು ಹರಿಹರ ಮಾತೆಯ ಮೂಲಸ್ಥಾನದಲ್ಲಿ ಅದ್ಬುತ ಮಾತೆಯ ಪ್ರತಿಮೆಯನ್ನು ಮರದ ಪೆÇಟರೆಯಲ್ಲಿ ಪ್ರತಿಷ್ಟಾಪಿಸಿ ದಿಂದಲೂ ಭಕ್ತಾದಿಗಳು ಗೌರವಿಸಿಕೊಂಡು ಬರುತ್ತಿದ್ದರು. ಇದರ ಸವಿನೆನಪಿಗಾಗಿ ಸುಂದರವಾದ ಬೃಹತ್ ಆಲದ ಮರದ ಪ್ರತಿಕೃತಿಯನ್ನು ನಿರ್ಮಿಸಿ ಅದರ ಪೆÇಟರೆಯಲ್ಲಿ “ಹರಿಹರ ಮಾತೆ”ಯ ಅದ್ಬುತ ಪ್ರತಿಮೆಯನ್ನು ಪ್ರತಿಷ್ಟಾಪಿಸಲು ನಿರ್ಮಿಸಲಾಗಿದ್ದ ವಿಶೇಷ ಗವಿಯನ್ನು ಐವರಿಕೋಸ್ಟ್ ನ ಪ್ರೇಷಿತ ರಾಯಭಾರಿಗಳಾಗಿರುವ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಅಂಬ್ರೋಸ್ ಮಾಡ್ತ ಇವರು ತಮ್ಮ ಅಮೃತಹಸ್ತದಿಂದ ನೆರವೇರಿಸಿದರು. ನಂತರ ಮಾತನಾಡಿದ ಪೂಜ್ಯರು, “ಮಾತೆಯ ಪುಣ್ಯ ಸನ್ನಿಧಾನವಾದ ಹರಿಹರಕ್ಕೆ ಬಂದು ಈ ಪೂಜ್ಯಕಾರ್ಯದಲ್ಲಿ ಸಹಭಾಗಿಯಾಗುವ ಸೌಭಾಗ್ಯವನ್ನು ಪಡೆದಿರುವ ನನಗೆ ತುಂಬಾ ಸಂತೋಷವಾಗುತ್ತದೆ. ಮಾತೆ ಮರಿಯಳು ಈ ಪುಣ್ಯಕ್ಷೇತ್ರದ ಮುಖಾಂತರ ಸಾವಿರಾರು ಭಕ್ತಾಧಿಗಳಿಗೆ ಉಪಕಾರವನ್ನು ನೀಡಿದ್ದಾರೆ. ಪೆÇೀಪ್ ಜಗದ್ಗುರುಗಳ ಪ್ರತಿನಿಧಿಯಾಗಿರುವ ನಾನು ನನ್ನಿಂದ ಈ ಪುಣ್ಯಕ್ಷೇತ್ರಕ್ಕೆ ನೆರವು ನೀಡುವ ಪ್ರಯತ್ನವನ್ನು ನೀಡುತ್ತೇನೆ” ಎಂಬ ಭರವಸೆಯನ್ನು ನೀಡಿದರು.

ವಿಶ್ರಾಂತ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಇಗ್ನೇಷಿಯಸ್ ಪಿಂಟೋರವರು ಸಂಭ್ರಮದ ದಿವ್ಯಬಲಿಪೂಜೆಯನ್ನು ನೆರವೇರಿಸಿ, ತಮ್ಮ ಸಂದೇಶವನ್ನು ನೀಡುತ್ತಾ, “ನನಗೆ ಹರಿಹರ ಎಂದರೆ ಆತ್ಮೀಯವಾದ ಸ್ಥಳವಾಗಿದೆ. ಇಂದು ಈ ದೇವಾಲಯವು ಪುಣ್ಯಕ್ಷೇತ್ರದ ಘನತೆಯನ್ನು ಪಡೆದಿದೆ. ಈ ಪುಣ್ಯಕ್ಷೇತ್ರವು ಪ್ರೀತಿಯ, ಶಾಂತಿಯ, ಉಪಶಮನದ ಪುಣ್ಯಕ್ಷೇತ್ರವಾಗಿ ಮಾರ್ಪಡಲಿ, ಏಕೆಂದರೆ ಮಾತೆ ಮರಿಯ ಪ್ರೀತಿಯ ಆಗರ. ದೇವಮಾತೆಯ ಅನುಗ್ರಹ ಎಲ್ಲಾ ಭಕ್ತಾಧಿಗಳಿಗೆ ಲಭಿಸಲಿ! ಇಲ್ಲಿ ದೈವಪ್ರಸನ್ನತೆ ಭಕ್ತರ ಹೃದಯದಲ್ಲಿ ಸದಾ ತುಂಬಿರಲಿ!,” ಎಂದು ಶುಭ ಹಾರೈಸಿದರು.

 

ವಿಶೇಷ ಜಪಸರ ಪ್ರಾರ್ಥನೆಯ ಬೆಳಕಿನ ಮೆರವಣಿಗೆ

ಪುಣ್ಯಕ್ಷೇತ್ರದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮಾತೆ ಮರಿಯಳ ಪುಣ್ಯಜೀವನದ ವೃತ್ತಾಂತದ ಮಂಟಪಗಳ ಹತ್ತಿರ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಲೋಬೊ ಇವರ ನೇತೃತ್ವದಲ್ಲಿ ವಿಶೇಷ ಜಪಸರ ಪ್ರಾರ್ಥನೆಯನ್ನು ನಡೆಸಲಾಯಿತು. ಈ ಜಪಸರ ಪ್ರಾರ್ಥನೆಯಲ್ಲಿ ಶಿವಮೊಗ್ಗ ಧರ್ಮಾಧ್ಯಕ್ಷರ ಜೊತೆಯಲ್ಲಿ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಅಂಬ್ರೋಸ್ ಮಾಡ್ತ, ಹಾಗೂ ಭದ್ರಾವತಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೋಸೆಫ್ ಅರುಮಚಡತ್ ಇವರು ಸಹಭಾಗಿಗಳಾಗಿ ಸಾವಿರಾರು ಸಂಖ್ಯೆಯಲ್ಲಿ ಮಾತೆಯ ಆವರಣದಲ್ಲಿ ಕೂಡಿ ಬಂದಿದ್ದ ಭಕ್ತ ಜನರೊಂದಿಗೆ ತಮ್ಮ ಕೈಗಳಲ್ಲಿ ಬಣ್ಣದ ದೀಪಗಳನ್ನು ಹಿಡಿದು ಪ್ರಾರ್ಥನೆಯನ್ನು ಸಲ್ಲಿಸಿದರು. ನಿಜಕ್ಕೂ ಅಂದಿನ ಸಂಜೆಯ ಈ ಪ್ರಾರ್ಥನಾ ವಿಧಿ ಅತ್ಯಂತ ಸುಂದರ ಹಾಗೂ ದೈವಿಕ ಪ್ರಸನ್ನತೆಯ ವಿಧಿಯಾಗಿ ಹೊರಹೊಮ್ಮಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಭಕ್ತಿಭಾವದಿಂದ ಇದರಲ್ಲಿ ಭಾಗವಹಿಸಿದರು. ಸಾಂಭ್ರಮಿಕ ಬಲಿಪೂಜೆಯ ನಂತರ ಭದ್ರಾವತಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೋಸೆಫ್ ಅರುಮಚಡತ್ ಇವರು ಪರಮಪ್ರಸಾದದ ಆಶೀರ್ವಾದ ನೀಡಿದರು.
 
ನಂತರ ನಡೆದ ವಂದನಾರ್ಪಣೆಯ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದ ಎಲ್ಲಾ ಧರ್ಮಾಧ್ಯಕ್ಷರಿಗೆ ವಂದನೆಯನ್ನು ಪುಣ್ಯಕ್ಷೇತ್ರದ ಧರ್ಮಗುರುಗಳಾದ ವಂದನೀಯ ಸ್ವಾಮಿ ಸ್ಟ್ಯಾನಿ ಡಿಸೋಜ ಇವರು ಸಲ್ಲಿಸಿದರು. ಶಿವಮೊಗ್ಗ ಧರ್ಮಾಧ್ಯಕ್ಷರು ಎಲ್ಲಾ ಧರ್ಮಾಧ್ಯಕ್ಷರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಟ ಗುರುಗಳಾದ ಅತೀ ವಂದನೀಯ ಸ್ವಾಮಿ ಫೆಲಿಕ್ಸ್ ಜೋಸೆಫ್ ನರೋನ ಇವರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಗುರುಗಳು, ಸಾಕಷ್ಟು ಸಂಖ್ಯೆಯಲ್ಲಿ ಧರ್ಮಭಗಿನಿಯರು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಆರಾಧನಾ ವಿಧಿಯ ವ್ಯವಸ್ಥೆಯನ್ನು ಕ್ರಮಬದ್ದವಾಗಿ ನಡೆಸಲು ವಂದನೀಯ ಸ್ವಾಮಿ ಡುಮಿಂಗ್ ಡಯಸ್ ಇವರು ಸಹಕಾರ ನೀಡಿದರು. ಅಂದು ಹರಿಹರ ಧರ್ಮಕೇಂದ್ರದ ಭಕ್ತಾಧಿಗಳಲ್ಲದೇ ಬೇರೆ ಬೇರೆ ಊರುಗಳಿಂದ ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಗಳಾಗಲು ಆಗಮಿಸಿದ್ದರು. ಈ ಸಂಧರ್ಭದಲ್ಲಿ ಪುಣ್ಯಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ತಮ್ಮ ಉದಾರ ಕಾಣಿಕೆ ನೀಡಿದ ದಾನಿಗಳನ್ನು ಧರ್ಮಾಧ್ಯಕ್ಷರು ಸನ್ಮಾನಿಸಿದರು. ಅಂದು ಎಲ್ಲರ ಮುಖಗಳಲ್ಲಿ ಧನ್ಯತಾ ಭಾವ ನಲಿದಾಡುತ್ತಿತ್ತು. ದೇವಾಲಯದ ಸಂಪೂರ್ಣ ಆವರಣ ಭಕ್ತಿಯ ತಾಣವಾಗಿ ಕಂಗೊಳಿಸುತ್ತಿತ್ತು. ಪ್ರತಿಯೊಬ್ಬರು ಪ್ರಾರ್ಥನಾಭಾವದಿಂದ ಮತ್ತು ವಿಶ್ವಾಸದಿಂದ ಭಾಗವಹಿಸಿದ್ದರು.

 

ಪುಣ್ಯಕ್ಷೇತ್ರದ ಪತ್ರಿಕೆಯ ಲೋಕಾರ್ಪಣೆ

ಪುಣ್ಯಕ್ಷೇತ್ರದ ಬಗ್ಗೆ ಮಾಹಿತಿ ಮತ್ತು ವಿಶೇಷ ಕಾರ್ಯಕ್ರಮಗಳ ಬಗ್ಗೆ ಭಕ್ತಾಧಿಗಳಿಗೆ ತಿಳಿಯಪಡಿಸುವ, ಮತ್ತು, ಹರಿಹರ ಮಾತೆಯಲ್ಲಿ ತಮ್ಮ ಕಷ್ಟ, ನೋವುಗಳಿಗೆ ಪ್ರಾರ್ಥಿಸಿ ಅದರಿಂದ ಉಪಕಾರ ಸ್ಮರಣೆಯನ್ನು ಮಾಡುವ ಸಾಕ್ಷಿಗಳನ್ನು ಪ್ರಕಟಿಸುವುದರ ಮೂಲಕ ಮಾತೆಯ ಭಕ್ತಿ ಇನ್ನೂ ಅಧಿಕಗೊಳಿಸುವ ಉದ್ದೇಶದಿಂದ” ಹರಿಹರ ಮಾತೆ” ಎನ್ನುವ ಪುಣ್ಯಕ್ಷೇತ್ರದ ಪತ್ರಿಕೆಯನ್ನು ಈ ಸಂಧರ್ಬದಲ್ಲಿ ಲೋಕಾರ್ಪಣೆ ಮಾಡಲಾಯಿತು. ಪತ್ರಿಕೆಯನ್ನು ಐವರಿಕೋಸ್ಟ್ ನ ಪ್ರೇಷಿತ ರಾಯಭಾರಿಗಳಾಗಿರುವ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಅಂಬ್ರೋಸ್ ಮಾಡ್ತ ಇವರು ತಮ್ಮ ಅಮೃತಹಸ್ತದಿಂದ ಬಿಡುಗಡೆಗೊಳಿಸಿದರು


 
ಚಿತ್ರ ವರದಿ - ಡಿ. ಪ್ರಾನ್ಸಿಸ್ ಕ್ಸೇವಿಯರ್, ಹರಿಹರ