HARIHAR ANNUAL FEAST 2012 CELEBRATION

Harihar - September 8, 2012 : The Annual Feast of Harihar Shrine was celebrated on September 8, 2012 with the theme of “Mother Mary is the Mother of Faith.” Most Rev. Gerald Isaac Lobo, the Bishop of Shimoga was the main celebrate of the Holy Eucharist.

 

 



 

ಹರಿಹರದ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

Harihar, September 8, 2012

ಹರಿಹರದ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನೆರವೇರಿತು. “ಮೇರಿಮಾತೆ ವಿಶ್ವಾಸಭರಿತೆ” ಎನ್ನುವ ಧ್ಯೇಯವಾಕ್ಯದಡಿ ಈ ವರ್ಷದ ವಾರ್ಷಿಕ ಮಹೋತ್ಸವನ್ನು ಆಚರಿಸಲಾಯಿತು. ಮಹೋತ್ಸವಕ್ಕೆ ಸಿದ್ಧತೆಯಾಗಿ ಆಗಸ್ಟ್ 30ರಿಂದ ಸೆಪ್ಟೆಂಬರ್ 7ರ ತನಕ ನವದಿನಗಳ ಭಕ್ತಿಯನ್ನು ಹಮ್ಮಿಕೊಳ್ಳಲಾಗಿತ್ತು.

 

 

ನವದಿನಗಳಲ್ಲಿ ಪ್ರತಿದಿನ ವಿವಿಧ ವಿಷಯಗಳ ಮೇಲೆ ಆಧಾರಿತ ಪ್ರಭೋದನೆಗಳನ್ನು ಆಹ್ವಾನಿತ ಗುರುಗಳು ನೀಡಿ ಭಕ್ತರ ಆಧ್ಯಾತ್ಮಿಕ ದಣಿವನ್ನು ನೀಗಿಸಿದರು.  ಆಗಸ್ಟ್ಟ್ 30 ರಂದು ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆಯನ್ನು ಮಾತೆಯ ಧ್ವಜಾರೋಹಣ ಮಾಡುವುದರ ಮೂಲಕ ನೀಡಲಾಯಿತು. ಧ್ವಜಾರೋಹಣವನ್ನು ಮೈಸೂರಿನ ಸಂತ ಜೋಸೆಫರ ಪ್ರಧಾನ ದೇವಾಲಯದ ಗುರುಗಳಾದ ವಂ| ವಿಲಿಯಂ ಇವರು ನೆರವೇರಿಸಿದರು. ಧ್ವಜಾರೋಹಣದ ಆಶೀರ್ವಾದವನ್ನು ಮೈಸೂರಿನ ಸಂತ ಫಿಲೋಮಿನ ಕಾಲೇಜಿನ ಉಪಪ್ರಾಂಶುಪಾಲರಾದ ವಂ| ಬರ್ನಾಡ್ ಪ್ರಕಾಶ್ ಇವರು ಮಾಡಿದರು.

ನಂತರ ದೇವಾಲಯದ ಪ್ರಧಾನ ಪ್ರವೇಶ ದ್ವಾರದ ಬಳಿ ಮೇರಿಮಾತೆಗೆ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಮಾತೆಯ ತೇರಿನ ಮೆರವಣಿಗೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ದಿನಾಂಕ 6ರಂದು ಮಾತೆಯ ಮೂಲಸ್ಥಾನವಾದ ಹಳೇ ದೇವಾಲಯದಲ್ಲಿ ಮಾತೆಯ ಧ್ವಜಾರೋಹಣ ಮಾಡಿ ದಿವ್ಯಬಲಿಪೂಜೆಯನ್ನು ಸಮರ್ಪಿಸಲಾಯಿತು.

 


 
ಸೆಪ್ಟೆÉಂಬರ್ 7ರಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಥಾಮಸ್ ವಾಝುಪಿಳ್ಳಿ ಇವರು ಸಾಂಭ್ರಮಿಕ ಬಲಿಪೂಜೆ-ಯನ್ನು ಸಮರ್ಪಿಸಿ ಪ್ರಭೋದನೆ ನೀಡುತ್ತಾ, “ಮೇರಿ ಮಾತೆ ಪ್ರಭು 0iÉುೀಸುವಿನ ತಾಯಿಯಾಗಿ, ಅವರ ರಕ್ಷಣಾ ಯೋಜನೆಯಲ್ಲಿ ವಿಶ್ವಾಸವನ್ನು ಪ್ರಕಟಿಸುವುದರಲ್ಲಿ ಅಗ್ರಸ್ಥಾನವನ್ನು ಪಡೆದು, ಇಂದು ನಮ್ಮೆಲ್ಲರಿಗೆ ವಿಶ್ವಾಸದ ತಾಯಿಯಾಗಿದ್ದಾರೆ. ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಯೂ ಮಾತೆಯ ಈ ವಿಶ್ವಾಸ ಜೀವನದ ಆದರ್ಶಗಳನ್ನು ರೂಢಿಸಿಕೊಳ್ಳಬೇಕು” ಎಂದು ನುಡಿದರು.

ಸೆಪ್ಟೆಂಬರ್ 8ರಂದು  ಮಹೋತ್ಸವದ ಸಾಂಭ್ರಮಿಕ ಪ್ರಧಾನ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ  ಪರಮಪೂಜ್ಯ ಡಾ|| ಜೆರಾಲ್ಡ್ ಐಸಾಕ್ ಲೋಬೊ ಇವರು ಅರ್ಪಿಸಿದರು. “ಮೇರಿಮಾತೆ ವಿಶ್ವಾಸಭರಿತೆ” ಎನ್ನುವ ಪದವಿಯನ್ನು ಪಡೆಯಲು ಅವರು ಮಾಡಿರುವ ತ್ಯಾಗದ ಫಲ. ಮಾತೆ ಮರಿಯ ತಮ್ಮ ಯುವಪ್ರಾಯದಿಂದಲೂ, ತಮ್ಮ ಜೀವ£ದುದ್ದಕ್ಕೂ ವಿಶ್ವಾಸವನ್ನೇ ಅನುಸರಿಸಿದರು. ಹೀಗೆ ಮಾತೆಯು ನಮ್ಮೆಲ್ಲರ ತಾಯಿಯಾಗಿ ಈ ಹರಿಹರದ ಅರೋಗ್ಯಮಾತೆಯಾಗಿ ಇಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ಆಗಮಿಸಿರುವ ಸರ್ವ ಯಾತ್ರಾರ್ಥಿಗಳ ಬೇಡಿಕೆ ಕೋರಿಕೆಗಳನ್ನು ಮಾತೆ0ಯು ನೀಗಿಸುತ್ತಾರೆ. ಅದಕ್ಕೆ ನೀವೆಲ್ಲರೂ ವಿಶ್ವಾಸದ ಜೀವನ ನಡೆಸಿರಿ ಎಂದು ಪೂಜ್ಯ ಧರ್ಮಾಧ್ಯಕ್ಷರು ಭಕ್ತಾದಿಗಳಿಗೆ ಸಂದೇಶವನ್ನು ನೀಡಿದರು.

 

 

ಪೂಜೆಯ ನಂತರ ಪುಣ್ಯಕ್ಷೇತ್ರದ ಪರವಾಗಿ ಧರ್ಮಕೇಂದ್ರದ ಗುರುಗಳಾದ ವಂ| ಸ್ಟ್ಯಾನಿ ಡಿಸೋಜ ಇವರು ಧರ್ಮಾಧ್ಯಕ್ಷರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಧರ್ಮಕೇಂದ್ರದ ಪಾಲನಾ ಪರಿಷತ್ತಿನ ಕಾರ್ಯÀರ್ಶಿಯಾದ ಶ್ರೀ ಡಿ.ಫ್ರಾನ್ಸಿಸ್ ಕ್ಸೇವಿಯರ್ ಇವರು ಧರ್ಮಾಧ್ಯಕ್ಷರಿಗೆ ನುಡಿನಮನವನ್ನು ಸಲ್ಲಿಸಿದರು.

ಸಂಜೆ ಸೇವಂತಿಗೆ ಹೂವಿನಿಂದ ಶೃಂಗರಿಸಿದ ಮಾತೆಯ ತೇರಿನ ಮಹಾ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ  ದೇವಾಲಯಕ್ಕೆ ಮರಳಿತು. ನಂತರ ನಡೆದ ವಂದನಾರ್ಪಣಾ ಕಾರ್ಯಕ್ರಮದಲ್ಲಿ ಹರಿಹರ ಕ್ಷೇತ್ತ್ರದ ಶಾಸಕರಾದ ಬಿ. ಪಿ. ಹರೀಶ್ ಇವರನ್ನು ಸನ್ಮಾನಿಸಲಾಯಿತು.

 


 
ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು ವಿಶೇಷವಾಗಿತ್ತು.  ಆನೇಕ ಭಕ್ತರು ತುಂಗಭದ್ರಾ ನದಿಯಲ್ಲಿ ಮಿಂದು ದೀಡ್ ನಮಸ್ಕಾರ, ಉರುಳು ಸೇವೆಯನ್ನು ಮಾಡುತ್ತಿದ್ದರು. ಹರಿಹರದ ಆರೋಗ್ಯ ಮಾತೆಯ ಅದ್ಭುತ ಪ್ರತಿಮೆಯನ್ನು ದರ್ಶನ ಮಾಡಲೆಂದು ಬೆಳಗ್ಗೆ 3.00 ಗಂಟೆಗೂ ಮುಂಚೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸರತಿಸಾಲಿನಲ್ಲಿ ಬಂದು ಮಾತೆಗೆ ಸೀರೆ, ತೆಂಗಿನಕಾಯಿ ಹೂ ಮೇಣದಬತ್ತಿಗಳನ್ನು ಕಾಣಿಕೆಗಳನ್ನಾಗಿ ಅರ್ಪಿಸಿದರು.

 

ವಿಶೇಷ ಆಕರ್ಷಣೆ

ಪುಣ್ಯಕ್ಷೇತ್ರದ ವಿಶೇಷ ಆಕರ್ಷಣೆಯಾಗಿ ಈ ಬಾರಿ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ನಿರ್ಮಾಣಗಳನ್ನು ಮಾಡಲಾಗಿದೆ. ದೇವಾಲಯದ ಎರಡೂ ಪಕ್ಕಗಳಲ್ಲಿ 0iÉುೀಸುಕ್ರಿಸ್ತರ ಜನನದ ದೃಶ್ಯಾವಳಿ ಮತ್ತು 0iÉುೀಸು ಕ್ರಿಸ್ತರ ಮರಣದ ಕಲ್ವಾರಿ ಚಿತ್ರಣಗಳನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ದೇವಾಲಯದ ಒಳಭಾಗದಲ್ಲಿ ಹರಿಹರದ ಆರೋಗ್ಯಮಾತೆಯ ಅದ್ಬುತ ಪ್ರತಿಮೆಯ ಮರದ ಪೆÇಟರೆಯ ನಿರ್ಮಾಣ. ಈ ಮಹೋತ್ಸವಕ್ಕೆ ಯಾವುದೇ ಜಾತಿ ಕುಲ ಭಾಷೆ ಎನ್ನದೆ ಜನರು ತಂಡೋಪತಂಡವಾಗಿ ಆಗಮಿಸಿ ಮಾತೆಯ ದರ್ಶನವನ್ನು ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 

 

Comments powered by CComment

Home | News | Sitemap | Contact Us

Copyright © 2016 - www.hariharshrine.org .
Powered by eCreators

Contact Us

Phone: 08192 - 242269
    E-mail: [email protected]
[email protected]

Fr. Anthony Peter : +917349246751

Shrine of Our Lady of Health
P.B.No: 19, Church Road
Harihar - 577 601
Davanagere District
Karnataka