Harihar September 8, 2013 : "Bosom of Mother Mary, Door to Blessedness" is the theme of annual Feast of Shrine of Our Lady of Health, Harihar celebrated on Sunday, September 8, 2013.  Most Rev. Robert Miranda, the Bishop of Gulburga was the main celebrate of the Feast Holy Eucharist.

HARIHAR ANNUAL FEAST 2013 CELEBRATION

 

 



 

ಅತ್ಯಂತ ಸಡಗರದಿಂದ ಹರಿಹರ ಆರೋಗ್ಯ ಮಾತೆಯ ಮಹೋತ್ಸವ ಆಚರಣೆ

Harihar, September 8, 2013

ಅತ್ಯಂತ ಸಡಗರದಿಂದ ಹರಿಹರ ಆರೋಗ್ಯ ಮಾತೆಯ ಮಹೋತ್ಸವ ಆಚರಣೆ ಸೆಪ್ಟೆಂಬರ್ 8, 2013ರಂದು, ಹರಿಹರ ನಗರದ ಆರೋಗ್ಯ ಮಾತೆಯ ಮಹೋತ್ಸವವು ಅತ್ಯಂತ ವಿಜೃಂಭಣೆ ಧಾರ್ಮಿಕ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.

 

 

 

ಮಹೋತ್ಸವದ ಅಂಗವಾಗಿ ನಡೆದ ಪ್ರಧಾನ ಪೂಜೆಯನ್ನು ಗುಲ್ಬರ್ಗದ ಧರ್ಮಾಧ್ಯಕ್ಷರಾದ ಪರಮಪೂಜ್ಯ ರಾರ್ಬಟ್ ಮಿರಾಂಡ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಬೋಧನೆ ನೀಡಿದ ಇವರು. ಇಂದಿನ ದಿನಗಳÀಲ್ಲಿ ಪ್ರತಿಯೊಬ್ಬರು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು, ತನ್ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು. ಮುಂದುವರೆದು ಮಾತನಾಡಿದ ಅವರು ಇಂದು ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಜನಸಂಖ್ಯಾ ಅನುಪಾತ ಗಂಡು ಮಕ್ಕಳ ಅನುಪಾತಕ್ಕಿಂತ ಕಡಿಮೆ ಇದೆ ಎಂದು ಜನಗಣತಿ ಹೇಳುತ್ತದೆ. ಇದು ಆಘಾತಕಾರಿ ವಿಷಯ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಾಹಿತಿಗಳಾದ ಡಾ|| ಡಿ.ಫ್ರ್ರಾನ್ಸಿಸ್ ಕ್ಸೇವಿಯರ್ ಇವರು ಬರೆದಿರುವ "ಹರಿಹರ ಆರೋಗ್ಯ ಮಾತೆಯ ಚರಿತ್ರೆ" ಪುಸ್ತಕ ಹಾಗೂ ವಂ. ಡುಮಿಂಗ್ ಡಯಸ್ ಇವರು ಆಂಗ್ಲ ಭಾಷೆಯಲ್ಲಿ ಬರೆದಿರುವ "ದಿ ಬ್ರೀಫ್ ಇಸ್ಟರಿ ಆಫ್ ಹರಿಹರ ಶ್ರೈನ್" ಎಂಬ ಪುಸ್ತಕವನ್ನು ಧರ್ಮಾಧ್ಯಕ್ಷರು ಬಿಡುಗಡೆಗೊಳಿಸಿದರು. ಇದೇ ವೇಳೆ ಇಬ್ಬರೂ ಬರಹಗಾರರನ್ನು ಪೂಜ್ಯರು ಸನ್ಮಾನಿಸಿದರು ಹಾಗೆಯೇ ಬ್ರದರ್ ಟಿ.ಕೆ.ಜಾರ್ಜರವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

Comments powered by CComment

Home | News | Sitemap | Contact Us

Copyright © 2016 - www.hariharshrine.org .
Powered by eCreators

Contact Us

Phone: 08192 - 242269
    E-mail: [email protected]
[email protected]

Fr. Anthony Peter : +917349246751

Shrine of Our Lady of Health
P.B.No: 19, Church Road
Harihar - 577 601
Davanagere District
Karnataka