Harihar - September 28, 2012 : On September 28, 2012 Most Rev. Gerald Isaac Lobo, the Bishop of Shimoga blessed and inaugurated "Adoration Chapel" at the Harihar Shrine.  This Adoration Chapel is opened for all the time for the pilgrim.  Pilgrims are encouraged to render their prayers and intentions to the special devotion to the Blessed Sacrament.

 

 



 

ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಪ್ರಪ್ರಥಮ ಕ್ರಿಸ್ತಾರಾಧನ ದೇವಳ ಉದ್ಘಾಟನೆ

“ದೈವ ದರ್ಶನದಿಂದ ಮನಶಾಂತಿ” ದಿವ್ಯ ಪರಮಪ್ರಸಾದದ ಆರಾಧನೆಯ ಪುಣ್ಯ ಫಲವು ಸರ್ವರಿಗೂ ಲಭಿಸುವಂತೆ ಹರಿಹರದ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಪ್ರಪ್ರಥಮ “ಕ್ರಿಸ್ತಾರಾಧನ ದೇವಳ” (Adoration chapel) ವನ್ನು ದಿನಾಂಕ 28.09.2012 ರಂದು ಅತ್ಯಂತ ಭಕ್ತಿಭಾವದಿಂದ ಉದ್ಘಾಟಿಸಲಾಯಿತು. ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಜೆರಾಲ್ಡ್ ಐಸಾಕ್ ಲೋಬೊ ಇವರು ಈ ಕ್ರಿಸ್ತಾರಾಧನ ದೇವಳವನ್ನು ಅಂದು ನಡೆದ ದಿವ್ಯ ಪರಮಪ್ರಸಾದ ಆರಾಧನಾ ವೇಳೆಯಲ್ಲಿ ಉದ್ಘಾಟಿಸಿದರು. ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಈ ದೇವಳವು ಅತ್ಯಂತ ಸುಂದರವಾಗಿದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಅಧ್ಯಾತ್ಮಿಕ ದಿವ್ಯಾನುಭವ ನೀಡುವಂತಿದೆ
 
ಮಂದಿರದ ಒಳಗೆ ಕ್ರಿಸ್ತ 0iÉುೀಸು ಗೆತ್ಸೆಮನೆ ತೋಪಿನಲ್ಲಿ ಪ್ರಾರ್ಥಿಸುತ್ತಿರುವ ಚಿತ್ರ, ಮತ್ತು ನಿರ್ಜನ ಪ್ರದೇಶದಲ್ಲಿ ಪ್ರಭು 0iÉುೀಸು ಐದು ರೊಟ್ಟಿ ಎರಡು ಮೀನಿನ ಅದ್ಬುತ ಕಾರ್ಯದ ಬೃಹತ್ ಚಿತ್ರಪಟವನ್ನು ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಾಧ್ಯಕ್ಷರು ಹರಿಹರದ ಆರೋಗ್ಯ ಮಾತೆಯ ಸನ್ನಿಧಿಗೆ ಬರುವ ಭಕ್ತಾಧಿಗಳಿಗೆ ಆಧ್ಯಾತ್ಮಿಕ ದಿವ್ಯಾನುಭವ ಆಗಬೇಕು. ಅವರೆಲ್ಲರಿಗೆ ಮಾನಸಿಕ ನೆಮ್ಮದಿಯ ಜೊತೆಗೆ ಅವರ ಜೀವನದಲ್ಲಿ ಹೊಸದೊಂದು ಚೇತನ ಮರಳಿ ಬರಬೇಕು. ಇದಕ್ಕಾಗಿ ಇಡೀ ಈ ಪುಣ್ಯಕ್ಷೇತ್ರದ ಆವರಣವನ್ನು ಭಕ್ತಿಪ್ರದಾನವಾದ ಪರಿಸರದಿಂದ ತುಂಬಿಸಬೇಕು ಎಂಬ ಉದ್ದೇಶದಿಂದ ಅನೇಕ ವರ್ಷಗಳಿಂದ ಪ್ರಯತ್ನಪಟ್ಟು ಈಗ ಈ ಅತ್ಯಂತ ಸುಂದರ ಹಾಗೂ ನೆಮ್ಮದಿಯ ತಾಣವಾದ ಈ ಕ್ರಿಸ್ತಾರಾಧನ ದೇವಳವನ್ನು ನಾವು ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿದ ಅವರು, ಈ ಕ್ರಿಸ್ತಾರಾಧನಾ ದೇವಳಕ್ಕೆ ಎಲ್ಲರೂ ಬನ್ನಿರಿ ಪ್ರಭು 0iÉುೀಸುವಿನ ಸನ್ನಿಧಾನದಲ್ಲಿ ಸ್ವಲ್ಪ ಸಮಯ ಇದ್ದು ಪ್ರಾರ್ಥಿಸಿರಿ. ಖಂಡಿತ ನಿಮಗೆ ದೇವರ ಕೃಪೆ ದೊರೆಯುತ್ತದೆ ಎಂದು ಕರೆನೀಡಿದರು. ಇದೇ ಸಂದರ್ಭದಲ್ಲಿ ದೇವಾಲಯದ ಒಳಗೆ ಸ್ನಾನದೀಕ್ಷೆ ನೀಡುವ ಪವಿತ್ರ ಸ್ಥಳವನ್ನೂ ಕೂಡ ಧರ್ಮಾಧ್ಯಕ್ಷರು ಉದ್ಘಾಟಿಸಿದರು.
 
ಈ ಸಂದರ್ಭದಲ್ಲಿ ಪುಣ್ಯಕ್ಷೇತ್ರದ ಧರ್ಮಗುರುಗಳಾದ ವಂದನೀಯ ಸ್ವಾಮಿ ಸ್ಟ್ಯಾನಿ ಡಿಸೋಜ, ವಂ ಅಂಥೋಣಿ ಡಿಸೋಜ, ವಂ ಫಾದರ್ ಜೋಜಿ, ವಂ ಫಾದರ್ ಅಂಥೋಣಿ ರಾಜ್, ವಂದನೀಯ ಫಾದರ್ ವಿನ್ಸೆಂಟ್ ಪಿಂಟೋ ಇವರು ಉಪಸ್ಥಿತರಿದ್ದರು.

 
ಚಿತ್ರ ವರದಿ - ಡಿ. ಪ್ರಾನ್ಸಿಸ್ ಕ್ಸೇವಿಯರ್, ಹರಿಹರ

 

Comments powered by CComment

Home | News | Sitemap | Contact Us

Copyright © 2016 - www.hariharshrine.org .
Powered by eCreators

Contact Us

Phone: 08192 - 242269
    E-mail: [email protected]
[email protected]

Fr. Anthony Peter : +917349246751

Shrine of Our Lady of Health
P.B.No: 19, Church Road
Harihar - 577 601
Davanagere District
Karnataka