Print
ಕ್ರಿ.ಶ. 1255 :

ಹರಿಹರ ನಗರದ ಅಸ್ತಿತ್ವ.

 

ಕ್ರಿ.ಶ. 1779 :

ಬ್ರಿಟಿಷ್  ರೆಸಿಡೆಂಟ್ ಬ್ಯಾರಿಕ್ಲೋಸ್ ಸೈನಿಕ ದಂಡಿನ ಸ್ಥಾಪನೆ. ಕ್ರೈಸ್ತ ಜನರ ಅಸ್ತಿತ್ವ.

 

ಕ್ರಿ.ಶ. (ಸುಮಾರು)1800 :

ಮಾತೆ ಮೇರಿಯ ಪ್ರತಿಮೆ ಭಕ್ತ ಬ್ರಾಹ್ಮಣನಿಗೆ ತುಂಗಭದ್ರ ನದಿಯಲ್ಲಿ ಪ್ರಾಣವನ್ನು ರಕ್ಷಿಸಿದ ವರ್ಷ.

 

ಕ್ರಿ.ಶ.1800(ಸುಮಾರು) :

ಮೇರಿ ಮಾತೆಯ ಪ್ರತಿಮೆಯನ್ನು ಭಕ್ತ ಬ್ರಾಹ್ಮಣನು ತನ್ನ ಮನೆಯ ಅಂಗಳದ ಮರದ

ಪೆÇಟರೆಯಲ್ಲಿ ಇಟ್ಟು ಪೂಜಿಸಲು ಆರಂಭ

ಕ್ರಿ.ಶ.1833 :

ಫ್ರೆಂಚ್ ಗುರು, ಫಾದರ್ ಬಿಗೋ ಬೋಕ್ಲೇರ್ ಹರಿಹರಕ್ಕೆ ಭೇಟಿ ಮತ್ತು  ಪಾಂಡಿಚೇರಿಯ

ಗುರುಶ್ರೇಷ್ಠ ಬೋನಾ ಇವರಿಗೆ ವರದಿ.

ಕ್ರಿ.ಶ. 1833 :

ಹರಿಹರ ಮಾತೆಯ ಮೂಲ ಸ್ಥಳದಲ್ಲಿ ಫ್ರೆಂಚ್ ಗುರು, ಫಾದರ್ ಬಿಗೋ ಬೋಕ್ಲೇರ್ ಪುಟ್ಟ

ಪ್ರಾರ್ಥನಾಲಯ ಕಟ್ಟಿಸಿದರು.

ಕ್ರಿ.ಶ. 27.7.1847 :

ಹರಿಹರ ಮಾತೆಯ ಮೂಲ ಪುಟ್ಟ ಮನೆಯಲ್ಲಿ ಶಿವಮೊಗ್ಗದ ಭಕ್ತರ ಪ್ರಥಮ ವಿವಾಹ

ಸಂಸ್ಕಾರ ಜರುಗಿತು.

ಕ್ರಿ.ಶ. 04.08.1847 :

ಹರಿಹರ ಮಾತೆಯ ಮೂಲ ಪುಟ್ಟ ಮನೆಯಲ್ಲಿ ಶಿವಮೊಗ್ಗದ ಭಕ್ತರ ಪ್ರಥಮ ಜ್ಞಾನಸ್ನಾನ

ಸಂಸ್ಕಾರ ಜರುಗಿತು.

ಕ್ರಿ.ಶ. 1847 : ಪ್ರಥಮ ಬಾರಿಗೆ ಹರಿಹರ ಮಾತೆಯ ಮಹೋತ್ಸವದ ಆಚರಣೆ ಆರಂಭ.
ಕ್ರಿ.ಶ. 1870 :

ಫ್ರೆಂಚ್ ಗುರು, ಫಾದರ್ ಕ್ಲೈನರ್ ಇವರಿಗೆ ಹರಿಹರ ಮಾತೆಯ ಮೂಲ ದೇವಾಲಯದ

ಉಸ್ತುವಾರಿ.

ಕ್ರಿ.ಶ. 16.11.1871 :

ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಪೂಜ್ಯ ಸ್ಟೀಫನ್ ಲೂಯಿಸ್ ಶಾರ್ಬೊನೊ ಹರಿಹರ

ಮಾತೆಯ ಹಳೆ ದೇವಾಲಯಕ್ಕೆ ಭೇಟಿ ಮತ್ತು ಮೂರು ದಿನಗಳ ವಾಸ್ತವ್ಯ

ಕ್ರಿ.ಶ. 1888 :

ಫ್ರೆಂಚ್ ಗುರು, ಫಾದರ್ ಜಾರಿಚ್ ಹರಿಹರಕ್ಕೆ ಭೇಟಿ ಮತ್ತು ಹರಿಹರ ಮಾತೆಯ ಬಗ್ಗೆ

ಮಾಹಿತಿ ಸಂಗ್ರಹಣೆ.

ಕ್ರಿ.ಶ. 1895 :

ಫ್ರೆಂಚ್ ಗುರು, ಫಾದರ್ ಜಾರಿಚ್ ಇವರಿಂದ ಹರಿಹರ ಮಾತೆಯ ಬಗ್ಗೆ “ಹಿಸ್ಟರಿ ಆಫ್

ಮೈಸೂರು ಮಿಷನ್ಸ್” ಪುಸ್ತಕದಲ್ಲಿ ದಾಖಲು.

ಕ್ರಿ.ಶ. 14.09.1954 :

ಪೂನಾ-ಬೆಂಗಳೂರು ರಸ್ತೆಯಲ್ಲಿ ದೇವಾಲಯ ಕಟ್ಟಲು ಫಾದರ್ ಲಾಜರಸ್ ಡಿಸೋಜ

ಇವರಿಂದ ಜಮೀನು ಖರೀದಿ.

ಕ್ರಿ.ಶ. 8.9. 1963 :

ಪೂನಾ-ಬೆಂಗಳೂರು ರಸ್ತೆಯಲ್ಲಿ ಫಾದರ್ ಲಾಜರಸ್ ಡಿಸೋಜ ಇವರಿಂದ ದೇವಾಲಯ

ನಿರ್ಮಾಣ, ಬೆಂಗಳೂರು ಮಹಾಧರ್ಮಾಧ್ಯಕ್ಷ ಥಾಮಸ್ ಪೆÇೀತುಕಾಮುರಿ ಇವರಿಂದ

ದೇವಾಲಯದ ಉದ್ಘಾಟನೆ. ಮಾತೆಯ ಪುಣ್ಯ ಪ್ರತಿಮೆಯನ್ನು ಹಳೇ ದೇವಾಲಯದಿಂದ

ನೂತನ ದೇವಾಲಯಕ್ಕೆ ಸ್ಥಳಾಂತರ ಮತ್ತು ಪ್ರತಿಷ್ಠಾಪನೆ.

ಕ್ರಿ.ಶ. 1977 :

ಹರಿಹರಕ್ಕೆ ಹೊಸ ಧರ್ಮಕೇಂದ್ರದ ಸ್ಥಾನಮಾನ ಮತ್ತು ಫಾದರ್ ಟೆರೆನ್ಸ್ ಫ್ರಾಂಜ್ ಇವರು

ಧರ್ಮಕೇಂದ್ರದ ಗುರುವಾಗಿ ನೇಮಕ.

ಕ್ರಿ.ಶ. 1984-85 : ಹಳೇ ದೇವಾಲಯದ ಆವರಣದಲ್ಲಿ ಫಾದರ್ ಎಂ.ಅಲ್ಫೋನ್ಸ್ ರಾಜ್‍ಕುಮಾರ್ ಇವರಿಂದ

ಪ್ರಾರ್ಥನಾಲಯ ಮತ್ತು ಆರೋಗ್ಯಕೇಂದ್ರ ಸ್ಥಾಪನೆ.

ಕ್ರಿ.ಶ. 08.09.1985 :

ಫಾದರ್ ಎಂ. ಎ. ರಾಜ್‍ಕುಮಾರ್ ಇವರಿಂದ ಹರಿಹರ ಮಾತೆಯ ಬಗ್ಗೆ ಸಚಿತ್ರ ಕೈಪಿಡಿ

ಮತ್ತು ನವೇನ ಪ್ರಾರ್ಥನೆ ಪುಸ್ತಕ ಪ್ರಕಟನೆ.

ಕ್ರಿ.ಶ. 26.04.1989 :

ನೂತನ ದೇವಾಲಯಕ್ಕೆ ಧರ್ಮಾಧ್ಯಕ್ಷ ಇಗ್ನೇಶಿಯಸ್ ಪಿಂಟೋ ಇವರಿಂದ ಶಂಕುಸ್ಥಾಪನೆ.

ಕ್ರಿ.ಶ. 31.08.1992 :

ಫಾದರ್ ಜೇಸು ರಕ್ಷಕ ನಾಥನ್ ಇವರಿಂದ ನೂತನ ದೇವಾಲಯ ನಿರ್ಮಾಣ. ರಾಜ್ಯ

ಸಚಿವ ಕೆ.ಜೆ ಜಾರ್ಚ್ ಇವರಿಂದ ಉದ್ಘಾಟನೆ ಮತ್ತು ಧರ್ಮಾಧ್ಯಕ್ಷ ಇಗ್ನೇಶಿಯಸ್ ಪಿಂಟೋ

ಇವರಿಂದ ಆಶೀರ್ವಚನ.

ಕ್ರಿ.ಶ. 2000 :

ಯಾತ್ರಿಕರ ಭವನಕ್ಕೆ ಗುರುಶ್ರೇಷ್ಠ ಪೀಟರ್ ಅರುಳ್ ಇವರಿಂದ ಕಟ್ಟಡ ಆರಂಭ.

ಕ್ರಿ.ಶ. 01.09.2002 :

ಫಾದರ್ ಮಾರ್ಕ್ ಪ್ಯಾಟ್ರಿಕ್ ಡಿಸಿಲ್ವ ಇವರಿಂದ ಯಾತ್ರಿಕರ ಭವನ ನಿರ್ಮಾಣ ಮುಕ್ತಾಯ.

ರಾಜ್ಯ ಸಚಿವ ಟಿ. ಜಾನ್ ಇವರಿಂದ ಉದ್ಘಾಟನೆ ಮತ್ತು ಧರ್ಮಾಧ್ಯಕ್ಷರಾದ ಜೆರಾಲ್ಡ್

ಐಸಾಕ್ ಲೋಬೊ ಇವರಿಂದ ಅಶೀರ್ವಚನ.

ಕ್ರಿ.ಶ. 01.09.2002 :

ಹರಿಹರ ಮಾತೆಯ ಪುಣ್ಯಕ್ಷೇತ್ರದ ಬಗ್ಗೆ ಶ್ರೀ ಡಿ. ಫ್ರಾನ್ಸಿಸ್ ಕ್ಸೇವಿಯರ್ ಇವರು ಬರೆದಿರುವ

ಚರಿತ್ರೆ ಪುಸ್ತಕ ಪ್ರಕಟನೆ.

ಕ್ರಿ.ಶ. 2011 :

ಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜ ಇವರಿಂದ ಮಾತೆಯ ದೇವಾಲಯಕ್ಕೆ ಪುಣ್ಯಕ್ಷೇತ್ರದ

ಸ್ಥಾನಮಾನಕ್ಕಾಗಿ ಸಂಪೂರ್ಣ ದಾಖಲೆ, ಮಾಹಿತಿ ಸಂಗ್ರಹಣೆ ಮತ್ತು ಪ್ರಸ್ತಾವನೆ ಸಲ್ಲಿಕೆ.

ಕ್ರಿ.ಶ. 27.05.2012 :

ಹರಿಹರ ಮಾತೆಯ ಕ್ಷೇತ್ರಕ್ಕೆ ಪ್ರೇಷಿತ ರಾಯಭಾರಿ ಮಹಾ ಧರ್ಮಾಧ್ಯಕ್ಷ ಅಂಬ್ರೋಸ್

ಮಾಡ್ತ, ಧರ್ಮಾಧ್ಯಕ್ಷರಾದ ಜೆರಾಲ್ಡ್ ಐಸಾಕ್ ಲೋಬೊ, ಇಗ್ನೇಷಿಯಸ್ ಪಿಂಟೋ,

ಜೋಸೆಫ್ ಅರುಮಚಾಡತ್ ಇವರ ಸಮ್ಮುಖದಲ್ಲಿ “ಪುಣ್ಯಕ್ಷೇತ್ರ” ಪದವಿ ಪ್ರಾಪ್ತಿ ಮತ್ತು

       ‘ಪುಣ್ಯಕ್ಷೇತ್ರ’ ಶಾಸನದ ಘೋಷಣೆ (ಘೋಷಣಾ ಪತ್ರ ಬಿಡುಗಡೆ).
ಕ್ರಿ.ಶ. 2012 :

ಫಾದರ್ ಸ್ಟ್ಯಾನಿ ಡಿಸೋಜ ಇವರ ನೇತೃತ್ವದಲ್ಲಿ ಪುಣ್ಯಕ್ಷೇತ್ರದ ಆವರಣದಲ್ಲಿ ಮಾತೆಯ

ಜೀವನದ ಮಂಟಪಗಳು, ಕ್ರಿಸ್ತಾರಾಧನ ದೇವಳ, ನೂತನ ಪೂಜಾಪೀಠ, ಅದ್ಭುತ ಮಾತೆಯ

ಪ್ರತಿಮೆಯ ನೂತನ ಗವಿ, ಯೇಸುಸ್ವಾಮಿ ಜನನ ಮತ್ತು ಕಲ್ವಾರಿ ಬೆಟ್ಟದ ಪ್ರತಿಕೃತಿ, ಧಾರ್ಮಿಕ

ವಸ್ತುಗಳ ಮಳಿಗೆ ಇವುಗಳ ನಿರ್ಮಾಣ ಮತ್ತು ಧರ್ಮಾಧ್ಯಕ್ಷರಾದ ಜೆರಾಲ್ಡ್

ಐಸಾಕ್ ಲೋಬೊ ಇವರಿಂದ ಅಶೀರ್ವಚನ.

ಕ್ರಿ.ಶ. 8.9. 2013 :

ಫಾದರ್ ಸ್ಟ್ಯಾನಿ ಡಿಸೋಜ ಇವರಿಂದ ಹರಿಹರ ಮಾತೆಯ ಚಲನಚಿತ್ರ ನಿರ್ಮಾಣ ; ಡಿವಿಡಿ

ಬಿಡುಗಡೆ.

ಕ್ರಿ.ಶ. 8.9.2013 :

ಹರಿಹರ ಮಾತೆಯ ಪುಣ್ಯಕ್ಷೇತ್ರದ ಬಗ್ಗೆ ಫಾದರ್ ಡುಮಿಂಗ್ ಡಯಾಸ್ ಇವರು ಇಂಗ್ಲೀಷ್

ನಲ್ಲಿ ಬರೆದಿರುವ ಚರಿತ್ರೆ ಪುಸ್ತಕ ಪ್ರಕಟನೆ.

ಕ್ರಿ.ಶ. 30.08.2014 :

ಶಿವಮೊಗ್ಗ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋ ಎಸ್‍ಜೆ ಇವರಿಂದ ಮಾತೆಯ ಮ್ಯೂಜಿಯಂ,

ಪುಣ್ಯಕ್ಷೇತ್ರ ಶಾಸನ, ಆವರಣಕ್ಕೆ ಹಾಸುಗಲ್ಲು ಮತ್ತು ಪುಣ್ಯಕ್ಷೇತ್ರದ ವೆಬ್ ಸೈಟ್ ಉದ್ಘಾಟನೆ.